ಎಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಮೇಳೈಸಿದೆ. ಹರ್ ಘರ್ ತಿರಂಗಾ ಅಭಿಯಾನ ವ್ಯಾಪಕವಾಗಿ ಆವರಿಸಿಕೊಂಡಿದೆ. ಧ್ವಜ ಅಭಿಯಾನದ ಜೊತೆ ಹೊಸತೊಂದು ಅಭಿಯಾನಕ್ಕೆ ಶಿವಮೊಗ್ಗಕ್ಕೆ ಸರ್ಜಿ ಫೌಂಡೇಶನ್ ಮುನ್ನುಡಿ ಬರೆದಿದೆ. ನಗರದಲ್ಲಿನ ಸರ್ಜಿ ಆಸ್ಪತ್ರೆ ಖ್ಯಾತ ಮಕ್ಕಳ ತಜ್ಞ ಧನಂಜಯ್ ಸರ್ಜಿ ನೇತೃತ್ವದಲ್ಲಿ ಅಮೃತ ಮಹೋತ್ಸವ ನೆನಪಿನಲ್ಲಿ ಸುಮಾರು ಎರಡು ಸಾವಿರ ಮಕ್ಕಳಿಗೆ ಟೈಫಾಯಿಡ್ ಉಚಿತ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಆರಂಭ ಶನಿವಾರ ನಗರದ ದುರ್ಗಿಗುಡಿಯಲ್ಲಿರುವ ಸರಕಾರಿ ಆಂಗ್ಲ ಶಾಲೆಯಲ್ಲಿ ನಡೆಯಿತು. ] ಸರ್ಜಿ ಫೌಂಡೇಶನ್, ರೌಂಡ್ ಟೇಬಲ್ ಇಂಡಿಯಾ ಶಿವಮೊಗ್ಗ, ಭಾರತ ಸೇವಾದಳ ಶಾಖೆ ಸಂಯುಕ್ತಾಶ್ರಯದೊಂದಿಗೆ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ದುರ್ಗಿಗುಡಿ ಶಾಲೆಯಲ್ಲಿ ಬಡ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದಾರೆ. ಲಸಿಕೆ ಬಗ್ಗೆ ಕನಿಷ್ಠ ಅರಿವೂ ಇಲ್ಲದ ಪೋಷಕರಿದ್ದಾರೆ. ಉಚಿತವಾಗಿ ಹಮ್ಮಿಕೊಂಡ ಈ ಲಸಿಕಾ ಶಿಬಿರ ಅರ್ಥಪೂರ್ಣವಾಗಿದ್ದು, ನಿಜಕ್ಕೂ ಮಾನವೀಯ ಕಾಳಜಿಗೆ ಸಾಕ್ಷಿಯಾಯ್ತು.
Published Date
20-01-2025
Amrita Mahotsava celebration by Suri Foundation By Providing Free Typhoid Vaccine | Vijay Karnataka