
"ನಿಮ್ಮ ರಕ್ತದ ಸಕ್ಕರೆ ಮಟ್ಟ (ಬ್ಲಡ್ ಶುಗರ್) ಇನ್ನೂ ನಿಯಂತ್ರಣದಲ್ಲಿಲ್ಲ. ಕಳೆದ ತಿಂಗಳಿಗಿAತ ಊbಂ೧ಛಿ ಹೆಚ್ಚಿದೆ. ಏನಾದ್ರೂ ಸಿಹಿ ತಿನ್ನುತ್ತಿರುವಿರಾ? ಇಲ್ಲಾ ಡಾಕ್ಟ್ರೇ ಸಕ್ಕರೆ ನಾನು ಮುಟ್ಟೋದಿಲ್ಲ ಆದರೆ ಬೆಲ್ಲ ಮಾತ್ರ ತಿಂತೀನಿ, ಅವಾಗವಾಗ ಬೆಲ್ಲದ ಜೊತೆ ಶೇಂಗಾ ತಿಂತೀನಿ, ಮೂರೂ ಹೊತ್ತು ಬೆಲ್ಲದ್ ಚಾ ಕುಡಿತೀನಿ, ಬೆಲ್ಲದ ಉಂಡೆ ತಿಂತೀನಿ, ಅದು ನೈಸರ್ಗಿಕ, ಹಾನಿಕಾರಕ ಅಲ್ಲ ಅಂತ ನನ್ನ ಮನೆಯವರು ಹೇಳಿದ್ರು. ಹಾಗಾಗಿ ಸಕ್ಕರೆ ಬದಲು ನೈಸರ್ಗಿಕವಾಗಿ ಇರುವ ಬೆಲ್ಲ ಅಭ್ಯಾಸ ಮಾಡಿಕೊಂಡಿದ್ದೀನಿ. ನನ್ನ ಮಧುಮೇಹಕ್ಕೆ ಒಳ್ಳೇದು ಅಲ್ವಾ?" ಎಂದು ಸಂಗೂರ್ ಶುಗರ್ ಫ್ಯಾಕ್ಟರಿ ಸಮೀಪ ವಾಸವಿರುವ ೪೬ ವರ್ಷದ ಶುಗರ್ ರೋಗಿಯೊಬ್ಬರು ನನ್ನ ಬಳಿ ಬಂದು ಹೇಳಿದಾಗ, ನನ್ನ ಮನಸ್ಸಿನಲ್ಲಿ ಅವರ ಗ್ಲುಕೋಮೀಟರ್ 'ಅಯ್ಯೋ' ಎಂದು ಅಳುತ್ತಿರುವ ದೃಶ್ಯ ಕಂಡಿತು. ಅವರ ಮಾತಿನಲ್ಲಿದ್ದ ವಿಶ್ವಾಸಕ್ಕೆ ನಾನು ನಕ್ಕೆ, ಆದರೆ ಅದರ ಹಿಂದಿನ ಅಜ್ಞಾನ ನನ್ನನ್ನು ಚಿಂತೆಗೀಡುಮಾಡಿತು. ಬೆಲ್ಲದ ಬಗ್ಗೆ ಇಂತಹ ತಪ್ಪು ಕಲ್ಪನೆಗಳು ನಮ್ಮ ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿವೆ ಎಂದು ಯೋಚಿಸಿ ನನಗೆ ಆಶ್ಚರ್ಯವಾಯಿತು. 'ನೈಸರ್ಗಿಕ' ಎಂಬ ಪದವೇ ಮಧುಮೇಹಿಗಳಿಗೆ ಮಾರಣಾಂತಿಕ ಬಲೆಯಾಗಿದೆ, ಬೆಲ್ಲದ ಸತ್ಯ ಕಹಿಯಾಗಿದೆ. ಅದರಲ್ಲಿ ಸ್ವಲ್ಪ ಖನಿಜಗಳಿವೆ, ಗೈಸೆಮಿಕ್ ಸೂಚ್ಯಂಕ ಕೊಂಚ ಕಡಿಮೆ ಎಂದು ಹೇಳುತ್ತಾರೆ. ಆದರೆ ಇದೆಲ್ಲ ಮಧುಮೇಹಿಗಳಿಗೆ ಮೋಸದ ಬಲೆ, ನಿಮ್ಮ ದೇಹಕ್ಕೆ ಬೆಲ್ಲ ಮತ್ತು ಸಕ್ಕರೆ ಒಂದೇ. ಬೆಲ್ಲವನ್ನು ತಿಂದರೆ, ನಿಮ್ಮ ರಕ್ತದಲ್ಲಿ ಸಕ್ಕರೆ ಸುನಾಮಿ ಬರುತ್ತದೆ. ಅದು ಚಿನ್ನದ ಬಣ್ಣದ ಬೆಲ್ಲವೋ, ಬಿಳಿ ಸಕ್ಕರೆಯೋ - ನಿಮ್ಮ ಶರೀರಕ್ಕೆ ಎರಡೂ ಒಂದೇ. ಬೆಲ್ಲ ತಿಂದು ಮಧುಮೇಹವನ್ನು ಮೋಸಗೊಳಿಸಲು ಸಾಧ್ಯವಿಲ್ಲ, ಬೆಲ್ಲವೆಂಬುದು ಮಧುಮೇಹಿಗಳ ಪಾಲಿಗೆ ಮಧುರ ಮೋಸ. ಬೆಲ್ಲ ಮತ್ತು ಸಕ್ಕರೆ -ಮಧುಮೇಹಿಗಳಿಗೆ ಎರಡೂ ವಿಷವೇ ಸರಿ. ಮಧುಮೇಹಿಗಳಿಗೆ ಇದು ಮರಣಾಂತಿಕ ಆಹ್ವಾನ. ನಮ್ಮ ಹಿರಿಯರು ಹೇಳಿದ್ದು ಸುಳ್ಳಲ್ಲ, ಆದರೆ ವಿಜ್ಞಾನ ಹೇಳುವುದು ಬೇರೆ. ಈಗ ನಾವು ಯಾರನ್ನು ನಂಬಬೇಕು? ನಮ್ಮ ಸಂಪ್ರದಾಯವನ್ನಾ? ಅಥವಾ ನಮ್ಮ ಆರೋಗ್ಯವನ್ನಾ? ಇದು ಕೇವಲ ಸಿಹಿಯ ಪ್ರಶ್ನೆಯಲ್ಲ, ನಮ್ಮ ಜೀವನದ ಪ್ರಶ್ನೆ.
ನೆನಪಿರಲಿ: ಸಕ್ಕರೆ, ಬೆಲ್ಲ, ಜೇನುತುಪ್ಪ ಇವುಗಳಲ್ಲಿ ಬಹಳ ವ್ಯತ್ಯಾಸಗಳೇನೂ ಇಲ್ಲ. ಎಲ್ಲವೂ ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುವ ಆಹಾರಗಳೆ.!