
ದೈಹಿಕ ನೋವಿಗೆ ಒಂದು ಮಿತಿ ಇದೆ. ಇಂದು ನೋವಾದರೆ, ದಿನ ಕಳೆದಂತೆ ಆ ನೋವು ಮಾಯವಾಗಲೇಬೇಕು. ಇಲ್ಲವಾದರೆ ಆ ನೋವಿಗೇ ದೇಹ ಹೊಂದಿಕೊAಡು ಬಿಡುತ್ತದೆ. ಆದರೆ ಮಾನಸಿಕ ನೋವೆಂಬುದು ಅಷ್ಟು ಸುಲಭವಾಗಿ ಮಾಯವಾಗುವುದಿಲ್ಲ. ನೆನೆಸಿಕೊಂಡಾಗಲೆಲ್ಲ ಅಷ್ಟೇ ತೀವ್ರತೆಯಲ್ಲಿ ಅಥವಾ ಅದಕ್ಕೂ ಹೆಚ್ಚಿನ ತೀವ್ರತೆ ಪಡೆದುಕೊಳ್ಳುತ್ತದೆ. ಯಾಕೆ ಹಾಗಾಗುತ್ತದೆ? ಮೊದಲು ಈ ಪ್ರಕಾರದ ನೋವಿನ ಗುಣವನ್ನು ಆಲೋಚಿಸಿ, ನಂತರ ಇದನ್ನು ಹೇಗೆ ನಿಯಂತ್ರಿಸಬಹುದೆAಬುದರ ಮೇಲೆ ದೃಷ್ಟಿ ಬೀರೋಣ. ಮಾನಸಿಕ ನೋವು ನಿಜವಾಗಿಯೂ ಕಾಣದ ಘಟನೆ. ಇದು ನಮ್ಮ ಆಲೋಚನೆಗಳಲ್ಲಿದೆಯೇ ಹೊರತು, ಆಚೆಯಲ್ಲಿಲ್ಲ. ನಾವು ಈ ಮಾನಸಿಕತೆಗೆ ಯೋಚನೆ ಎಂಬ ನೀರು ಎರೆಯುವುದರಿಂದ ಅದನ್ನು ಹೆಮ್ಮರವಾಗಿಸುತ್ತೇವೆಯೇ ಹೊರತು, ಅದಾಗಿಯೇ ಅದು ಬೆಳೆಯುವುದಿಲ್ಲ. ಸಣ್ಣ ವಯಸ್ಸಿನಿಂದ ನಮಗೆ ಕಲಿಸಿದ ನೈತಿಕತೆಯ ಪಾಠ, ನಮ್ಮ ವಾತಾವರಣದಲ್ಲಿ ನಡೆಯುತ್ತಿರುವ ಘಟನೆಗಳ ಸರಣಿಗಳು ನಮ್ಮಲ್ಲಿ ಒಂದು ಬಗೆಯ ಮಾನಸಿಕ oಠಿeಡಿಚಿಣiಟಿg sಥಿsಣem ಅನ್ನು ಸೃಷ್ಟಿಸಿರುತ್ತವೆ. ನಾವು ಅದನ್ನೇ ನಮ್ಮ ಅರಿವಿಲ್ಲದಂತೆಯೇ ಅನುಸರಿಸುತ್ತಿರುತ್ತೇವೆ. ಇದನ್ನು ಒಂದು ಣheoಡಿಥಿ ಯಂತೆ ನೋಡುವುದು ಬೇಡ, ಒಂದು ನಿದರ್ಶನವನ್ನು ತೆಗೆದುಕೊಳ್ಳೋಣ. ಯಾರೋ ಒಬ್ಬ ವ್ಯಕ್ತಿ ನನ್ನನ್ನು ಹೊಗಳಿದ ಎಂದು ಭಾವಿಸೋಣ. ತಕ್ಷಣಕ್ಕೆ ನಾವೇನೂ ಯೋಚಿಸಬೇಕಾಗಿಲ್ಲ; ಮನಸ್ಸು ಪ್ರಫುಲ್ಲವಾಗುತ್ತದೆ. ಇಲ್ಲಿ ನಾವೇನು ಯೋಚನೆ ಮಾಡಿಕೊಂಡು ಖುಷಿಯಾಗಲಿಲ್ಲ. ಅದೇ ರೀತಿ ತೆಗಳಿದರೂ ಸಹ ನಮ್ಮಲ್ಲಾಗುವ ಬದಲಾವಣೆ ಕ್ಷಣಮಾತ್ರದಲ್ಲಿ ನಡೆಯುತ್ತದೆ. ಇದು ಹೇಗೆ ನಡೆಯಲು ಸಾಧ್ಯ? ಆತ ಹೊಗಳಿದ ಮಾತ್ರಕ್ಕೆ ದೈಹಿಕವಾಗಿ ನನಗೇನು ಲಾಭವಾಗಲಿಲ್ಲ. ಆದರೆ ಈ ಮಾನಸಿಕ ತೃಪ್ತಿಗೆ ಕಾರಣವೇನು? ಮೊದಲೇ ನಮ್ಮ ಮನಸ್ಸು ಇದಕ್ಕೆ ತಯಾರಾಗಿದೆ ಎಂದರ್ಥವಲ್ಲವೇ? ಇದನ್ನೇ oಠಿeಡಿಚಿಣiಟಿg sಥಿsಣem ಎನ್ನುತ್ತೇವೆ. ಸರಿ, ಈ ಮಾನಸಿಕ ನೋವನ್ನು ಕಡಿಮೆ ಮಾಡುವುದು ಹೇಗೆ? ಮಾಡಲೇಬೇಕೇನು? ದೈತ್ಯ ದೇಹವನ್ನು ಕುಣಿಸುವುದು ಈ ಮನಸ್ಸು. ಖಿನ್ನತೆ (ಜeಠಿಡಿessioಟಿ) ದೇಹಕ್ಕಾಗುವುದಿಲ್ಲ. ಅದು ಆಗುವುದು ಮನಸ್ಸಿಗೆ, ಆದರೆ ನಾಶವಾಗುವುದು ದೇಹ. ಇಷ್ಟೊಂದು ಶಕ್ತಿಶಾಲಿಯಾದ ಮನಸ್ಸಿನ ನಡವಳಿಕೆ ತಿಳಿದರೆ ಜೀವನ ಹಸನಾಗುವುದರಲ್ಲಿ ಸಂಶಯವಿಲ್ಲ. ಎಂದೋ ಯಾರೋ ಹೇಳಿದ ಮಾತು ನಮಗೆ ನೆನಪಿಲ್ಲದಿದ್ದರೆ ಅದರ ಬಗ್ಗೆ ಬೇಜಾರಾಗುತ್ತೇವೆಯೇ? ಹಾಗಾದರೆ ನೆನಪೇ ಅಪರಾಧಿಯೇನು? ಮಾನಸಿಕ ನೆಮ್ಮದಿಯ ಬದುಕಿಗೆ ನೆನಪಿನ ಅವಶ್ಯಕತೆ ಇದೆಯೇ? ಮರೆತು ಬದುಕುವುದು ಅಸಾಧ್ಯವೇ? ನಮ್ಮ oಠಿeಡಿಚಿಣiಟಿg sಥಿsಣem ಅನ್ನು ಒಪ್ಪಿಕೊಂಡು ಬದಲಾಗಲು ಪ್ರಯತ್ನಿಸಬಹುದೇ?